ಗ್ಲೋರಿಯಾ ಮೊಹಾಂತಿ (೨೭ ಜೂನ್ ೧೯೩೨ - ೧೧ ಡಿಸೆಂಬರ್ ೨೦೧೪) ಒಬ್ಬ ಭಾರತೀಯ ರಂಗಭೂಮಿ, ದೂರದರ್ಶನ ಮತ್ತು ಒಡಿಯಾ ಚಲನಚಿತ್ರೋದ್ಯಮದಲ್ಲಿ ಚಲನಚಿತ್ರನಟಿಯಾಗಿ ಕೆಲಸ ಮಾಡಿದವರು. ಒಡಿಯಾ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಅವರು ರಾಜ್ಯದ ಅತ್ಯುನ್ನತ ಗೌರವವನ್ನು ಪಡೆದರು. ೧೯೯೪ ರಲ್ಲಿ ಜಯದೇಬ್ ಪುರಸ್ಕಾರ ಮತ್ತು ೧೯೯೨ ರಲ್ಲಿ ಒಡಿಶಾ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದರು. ಸಾಂಸ್ಕತಿಕ ಸಂಸ್ಥೆ ಸ್ರ್ಜನ್ ಅವರಿಗೆ ೨೦೧೧ರ ವರ್ಷಕ್ಕೆ ಗುರು ಕೇಳುಚರಣ್ ಮೊಹಾಪಾತ್ರ ಪ್ರಶಸ್ತಿಯನ್ನು ನೀಡಿತು. ಇವರು ೨೦೧೨ ರಲ್ಲಿ ಸಾಂಸ್ಕೃತಿಕ ಸಂಸ್ಥೆ ಘುಂಗೂರ್‌ನಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದಿದ್ದಾರೆ. == ಆರಂಭಿಕ ಜೀವನ == ಚಿಕ್ಕ ವಯಸ್ಸಿನಲ್ಲಿ, ಮೊಹಾಂತಿ ಅವರಿಗೆ ತಮ್ಮ ಚಿಕ್ಕಮ್ಮ ನಟಿ ಅನಿಮಾ ಪೆದಿನಿ ಅವರಿಂದ ನೃತ್ಯ ಮತ್ತು ಸಂಗೀತ ಪರಿಚಯವಾಯಿತು. ಅವರು ಗುರು ಕೇಲುಚರಣ್ ಮೊಹಾಪಾತ್ರ ಅವರ ಬಳಿ ಒಡಿಸ್ಸಿ ನೃತ್ಯವನ್ನು ಕಲಿತರು. ಕಟಕ್‌ನ ನ್ಯಾಷನಲ್ ಮ್ಯೂಸಿಕ್ ಅಸೋಸಿಯೇಷನ್‌ನಲ್ಲಿ ಸಂಗೀತ ತರಬೇತಿ ಪಡೆದರು. ಅವರಿಗೆ ಬಾಲಕೃಷ್ಣ ದಾಶ್ ಮತ್ತು ಭುವನೇಶ್ವರ ಮಿಶ್ರಾ ಎಂಬ ಪ್ರಸಿದ್ಧ ಗಾಯಕರು ಮಾರ್ಗದರ್ಶನ ನೀಡಿದರು. <:2">"' ". . 25 2015. 2017-11-10.</> ಚಿಕ್ಕ ವಯಸ್ಸಿನಲ್ಲೇ ಅವರ ಆಸಕ್ತಿ ಮತ್ತು ಪ್ರತಿಭೆ ಅವರ ಸುದೀರ್ಘ ವೃತ್ತಿಜೀವನಕ್ಕೆ ಕಾರಣವಾಯಿತು. ಮೊಹಾಂತಿ ಒಬ್ಬ ಕ್ರೀಡಾಪಟು ಮತ್ತು ೧೯೫೭ ರಿಂದ ೧೯೬೦ ರವರೆಗೆ ರಾಜ್ಯ ಮಹಿಳಾ ವಾಲಿಬಾಲ್ ತಂಡವನ್ನು ಪ್ರತಿನಿಧಿಸಿದರು. == ವೃತ್ತಿ == ಮೊಹಾಂತಿ ಅವರು ಆಲ್ ಇಂಡಿಯಾ ರೇಡಿಯೊದಲ್ಲಿ ಗಾಯಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ೨೦ ವರ್ಷಗಳ ಕಾಲ ಸಂಸ್ಥೆಯ ಭಾಗವಾಗಿ ಮುಂದುವರೆದರು. ೧೯೪೪ ರಲ್ಲಿ, ಅವರು 'ಭಟ' ನಾಟಕದ ಮೂಲಕ ರಂಗಭೂಮಿಗೆ ಪರಿಚಿತವಾದರು, ಅಲ್ಲಿ ಅವರು ಪ್ರಮುಖ ನಟಿಯ ಪಾತ್ರವನ್ನು ನಿರ್ವಹಿಸಿದರು. ೧೯೪೯ ರಲ್ಲಿ, ಆಕೆಗೆ ಒಡಿಯ ಚಲನಚಿತ್ರ ಶ್ರೀ ಜಗನ್ನಾಥದಲ್ಲಿ ಪಾತ್ರವನ್ನು ನೀಡಲಾಯಿತು. ಗೋಪಾಲ್ ಘೋಷ್ ಎದುರು ಲಲಿತಾ ಪಾತ್ರವು ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿತು ಮತ್ತು ಅವರನ್ನು ಪ್ರಮುಖ ನಟಿಯಾಗಿ ಮಾಡಿತು. ರಂಗಭೂಮಿಯಲ್ಲಿನ ಅವರ ವೃತ್ತಿಜೀವನದ ಅವಧಿಯಲ್ಲಿ, ಒಡಿಯಾ, ಹಿಂದಿ, ಬೆಂಗಾಲಿ, ಉರ್ದು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ೧೦೦ ಕ್ಕೂ ಹೆಚ್ಚು ನಾಟಕಗಳನ್ನು ಪ್ರದರ್ಶಿಸಿದರು ಮತ್ತು ಈ ನಾಟಕಗಳನ್ನು ವಿವಿಧ ಭಾರತೀಯ ನಗರಗಳಲ್ಲಿ ಪ್ರದರ್ಶಿಸಲಾಯಿತು. ಮೊಹಾಂತಿ ಅವರು ಜಿಬಾಕು ದೇಬಿ ನಹಿ, ಠಾಕುರಾ ಘರಾ, ಸಾರಾ ಆಕಾಶ ಮತ್ತು ಪನಾಟಾ ಕಣಿಯಂತಹ ಒಡಿಯಾ ಟೆಲಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. == ಪ್ರಶಸ್ತಿಗಳು == ೧೯೫೨ ರಲ್ಲಿ ಪ್ರಜಾತಂತ್ರ ಪ್ರಚಾರ ಸಮಿತಿಯಿಂದ ಅತ್ಯುತ್ತಮ ರಂಗ ನಟಿ ಪ್ರಶಸ್ತಿ ೧೯೯೨ ರಲ್ಲಿ ಒಡಿಸ್ಸಾ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ೧೯೯೨ ರಲ್ಲಿ ಜಯದೇವ್ ಸಮ್ಮಾನ್ ೨೦೧೧ ರಲ್ಲಿ ಗುರುಕೇಲುಚರಣ್ ಮಹಾಪಾತ್ರ ಪ್ರಶಸ್ತಿ == ಚಿತ್ರಕಥೆ == ಮೊಹಾಂತಿ ಅವರಿಗೆ ಪಾರ್ಶ್ವವಾಯುವಿನಿಂದ ೧೧ ಡಿಸೆಂಬರ್ ೨೦೧೪ ರಂದು ನಿಧನರಾದರು. ಅವರ ಅಂತಿಮ ವಿಧಿಗಳನ್ನು ಒಡಿಶಾದ ಕಟಕ್‌ನಲ್ಲಿರುವ ಸತಿಚೌರಾ ಸ್ಮಶಾನದಲ್ಲಿ ನೆರವೇರಿಸಲಾಯಿತು. == ಉಲ್ಲೇಖಗಳು ==